KannadaSlate : Transliteration Help (F12 - switch between Kannada and English language)

Help (F12 - switch between Kannada and English language)

Wednesday, 14 December 2011

ಮೊಬೈಲ್ ಅಲ್ಲಿ ಕನ್ನಡ ಮತ್ತು ಕಂಪ್ಯೂಟರ್ ಅಲ್ಲಿ ಕನ್ನಡ



          ಮೊಬೈಲ್`ನಲ್ಲಿ ಕನ್ನಡ ಬರಲು ಕೆಲವು ವಿವಿಧ ರೀತಿಯ ಅಪ್ಲಿಕೇಶನ್`ಗಳ ಸಹಾಯದ ಅಗತ್ಯವಿದೆ.. ಒಂದೊಂದು  ಮೊಬೈಲ್ ಮಾಡೆಲ್`ಗಳಿಗೂ ಬೇರೆ ಬೇರೆ ವ್ಯವಸ್ಥೆಗಳು.. ಸಾಮಾನ್ಯವಾಗಿ ಅಂದರೆ ಒಪೆರಾ ಬ್ರೌಸೆರ್ ಅಲ್ಲಿ ಕನ್ನಡ ಬರುತ್ತದೆ.. ಕೆಲವು ಮೊಬೈಲ್ ಅಲ್ಲಿ ಇಂಡಿಕ್ ಫಾಂಟ್ಸ್ ಹಾಕಬೇಕು.. ಮತ್ತೆ ಕೆಲವು ಮೊಬೈಲ್ ಅಲ್ಲಿ ಬೋಲ್ಟ್ ಇಂಡಿಕ್ ಬ್ರೌಸೆರ್ ಬಳಸಬೇಕು.. ಇನ್ನು ಕೆಲವಕ್ಕೆ ಇಂಡಿಎಸ್ಎಂಎಸ್ ಹಾಗು ಪನಿನಿ ಕನ್ನಡ ಕೀಪ್ಯಾಡ್.. ಹೀಗೆ ವಿವಿಧ ರೀತಿಯಲ್ಲಿ ಬರುತ್ತದೆ.. ಇನ್ನು ಕೆಲವು ಸಾಫ್ಟ್`ವೇರ್ ಇವೆ... ಮೊಬೈಲ್ ಮಾಡೆಲ್ ಯಾವುದು  ಎಂದು ತಿಳಿದು ಅದಕ್ಕೆ ಹೋಲುವ ಅಪ್ಲಿಕೇಶನ್ ಹಾಕಬೇಕು... ಈಗ ಎಲ್ಲದಕ್ಕೋ ಅನ್ವಯವಾಗುವ ಯಾವ ಏಕೈಕ ಅಪ್ಲಿಕೇಶನ್`ಗಳು ಲಭ್ಯವಿಲ್ಲ.... ಆದರೆ ಅವುಗಳು ನಾವು ಬಳಸುವ ಸಿಂಕಾರ್ಡ್ ನೆಟ್`ವರ್ಕ್ ಜೀಪಿಆರ್`ಎಸ್ ವೇಗವನ್ನು ಅವಲಂಬಿಸಿ ಕಾರ್ಯ ನಡೆಸುತ್ತದೆ.. ಆದ ಕಾರಣ ಎಲ್ಲಾ ಕಡೆ ಉಪಯೋಗ ಮಾಡಲು ಮತ್ತು ಹೆಚ್ಚಿನ ಸಮಯ ಉಪಯೋಗ ಮಾಡಲು ಬರುವುದೋ ಇಲ್ಲವೋ ಹೇಳುವುದು ಕಷ್ಟ.... ನಿಮಗೆ ಇಷ್ಟವಿದ್ದಲ್ಲಿ ನಿಮ್ಮ ಮೊಬೈಲ್ ಮಾಡೆಲ್ ಯಾವುದು ಎಂದು ತಿಳಿಸಿ .. ಅದಕ್ಕೆ ಹೋಲುವ ಅಪ್ಲಿಕೇಶನ್ ಬಗ್ಗೆ ಮಾಹಿತಿ ಕೊಡುತ್ತೇವೆ.. ಅದನ್ನು ಡೌನ್`ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ಅಲ್ಲಿ ಹಾಕಿ.... ಉಪಯೋಗಿಸಲು ಪ್ರಯತ್ನ ಮಾಡಬಹುದು.. :)

5 comments:

  1. Sony ericsson J108i

    Samsung galaxy

    ಮೇಲಿನ ಎರಡೂ ಮೊಬೈಲಿಗೆ ಯಾವ ಅಪ್ಲಿಕೇಷನ್ ಬೇಕಾಗುತ್ತೆ ಸ್ವಲ್ಪ ತಿಳಿಸಿ ದಯವಿಟ್ಟು

    ReplyDelete
  2. Sony ericsson J108i ಆಪರೇಟಿಂಗ್ ಸಿಸ್ಟಮ್ ಗೊತ್ತಿಲ್ಲ...
    Samsung galaxy ಆದರೆ ಆಂಡ್ರಾಯ್ಡ್ ಆಪ್ಸ್... ಅಲ್ಲಿ ಭೇಟಿ ಕೊಡಿ.. ಕನ್ನಡ ಫಾಂಟ್ಸ್ ಡೌನ್`ಲೋಡ್ ಮಾಡಿ ಹಾಕಿಕೊಳ್ಳಿ.. :)

    ReplyDelete
  3. ಮೊಬೈಲ್ ಅಲ್ಲಿ ಕನ್ನಡ ಬರೆಯಲು ...
    ಬೋಲ್ಟ್ ಇಂಡಿಕ್ , ಪನಿನಿ ಕನ್ನಡ ಬರಹ , ಇಂಡಿಕ್ ಎಸ್ಎಂಎಸ್
    ಸೌಲಭ್ಯ ಬಳಸಬಹುದು..
    ಅದರ ಲಿಂಕ್ ಬೇಕಾದಲ್ಲಿ "ಗೆಟ್`ಜಾರ್.ಕಾಂ" ನೋಡಿ... :)
    ದಯವಿಟ್ಟು ಕೇಳಿ...
    ಇದರ ಉಪಯೋಗ ಎಲ್ಲಾ ಮೊಬೈಲ್ ಬಳಕೆದಾರರು ಮಾಡಿಕೊಳ್ಳಿ...
    ಅದರಲ್ಲೂ ಬೋಲ್ಟ್ ಇಂಡಿಕ್ .. "ಜಾವಾ" ದಲ್ಲಿದೆ...
    ಅದು ಎಲ್ಲಾ ಮೊಬೈಲ್`ಗಳಲ್ಲಿ ಬಳಸಲು ಅನುಕೂಲವಾಗಿದೆ.. :)
    ಆಂಡ್ರಾಯ್ಡ್ ... ಮೊಬೈಲ್ ಅಲ್ಲಿ ಕನ್ನಡ ಬರೆಯಲು... ಇಂಡಿಕ್ ಫಾಂಟ್ಸ್ ಹಾಕಬೇಕು...
    ಅದಕ್ಕೆ . ಆಂಡ್ರಾಯ್ಡ್ ಆಪ್ಸ್... ಅಲ್ಲಿ ಭೇಟಿ ಕೊಡಿ..
    ಆದರೆ ..
    ಬೋಲ್ಟ್ ಇಂಡಿಕ್ (bolt v.2.52) ಮತ್ತು ಪನಿನಿ ಕನ್ನಡ ಕೀಪ್ಯಾಡ್ (panini keypad) ಕನ್ನಡ ಬರೆಯಲು ಬಹಳಷ್ಟು ಮೊಬೈಲ್`ಗಳಲ್ಲಿ ಸಾಧ್ಯವಿದೆ..
    ಬೋಲ್ಟ್ .. "ಜಾವಾ"ದಲ್ಲಿರುವುದರಿಂದ ಎಲ್ಲಾ ಮೊಬೈಲ್`ಗಳಿಗೂ ಲಭ್ಯವಿದೆ... :)

    ---------------------------------------------------
    ಪ್ರಕಾಶ್ ಶ್ರೀನಿವಾಸ್... ಅವರ ಸಲಹೆ ...
    ಹಾಗೂ ಐಫೋನ್೪ ಉಪಯೋಗಿಸುವವರು ..
    ನಿಮ್ಮ ಅಪ್ ಸ್ಟೋರ್ ನಲ್ಲಿ ಐಕನ್ನಡ ಎಂದು ಹುಡುಕಿ
    ಡೌನ್ ಲೋಡ್ ಮಾಡಿಕೊಳ್ಳಿ ..!
    ಕನ್ನಡ ಬರೆಯಲು ಬಲು ಸುಲಭ !!

    ReplyDelete
  4. ಮೊದಲು ಆಂಡ್ರಾಯ್ಡ್ ... ಮೊಬೈಲ್ ಅಲ್ಲಿ ಕನ್ನಡ ಬರೆಯಲು... ಇಂಡಿಕ್ ಫಾಂಟ್ಸ್ ಹಾಕಬೇಕು... ಅದಕ್ಕೆ . ಆಂಡ್ರಾಯ್ಡ್ ಆಪ್ಸ್... ಅಲ್ಲಿ ಭೇಟಿ ಕೊಡಿ.. ಅದನ್ನು ಡೌನ್ಲೋಡ್ ಮಾಡಿ ಹಾಕಿದ ನಂತರ ಮತ್ತೆ getjar.com ಅಲ್ಲಿ ಪನಿನಿ ಕನ್ನಡ ಕೀಪ್ಯಾಡ್ (panini keypad) ಕನ್ನಡ ಬರೆಯಲು ಹಾಕಬೇಕು.. ಆಗ ಕನ್ನಡ ಬರೆಯಬಹುದು .. ಮತ್ತು ಕೆಲವು ಮೊಬೈಲ್ ಅಲ್ಲಿ ಕನ್ನಡ ಫಾಂಟ್ಸ್ ಇದ್ದರೆ ಸಾಕು .. ನೀವು www.kannadaslate.com ಅಲ್ಲಿ ಕನ್ನಡ ಬರೆದು ಕಾಪಿ & ಪೇಸ್ಟ್ ಕೂಡ ಮಾಡಬಹುದು .. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮೊಬೈಲ್ ಮಾಡೆಲ್ ನಂಬರ್ ತಿಳಿಸಿ .. :)

    ReplyDelete
  5. ನೀವು ಹೇಳುತ್ತಿರುವ ಆಂಡ್ರಾಯ್ಡ್ ಆಪ್ಸ್ ನ ಕೊಂಡಿ ಕೊಡಲು ಸಾಧ್ಯವೆ?
    ನನ್ನ ಮೊಬೈಲ್ (SPICE MI-350 Android 2.3.5 Gingerbread) ರೂಟ್ ಮಾಡಿದ್ದೇನೆ. ಕನ್ನಡ ಫಾಂಟನ್ನು ಹಾಕಿದ್ದರೂ ಕೂಡ ಕನ್ನಡ ಒತ್ತಕ್ಷರಗಳು ಸರಿಯಾಗಿ ಮೂಡುತ್ತಿಲ್ಲ. ಕನ್ನಡ ಬರೆಯಲು ನಾನು ಹೆಗಡೆಯವರ ಕನ್ನಡ-ಹಿಂದಿ ಕೀಲಿಮಣೆ ಬಳಸುತ್ತೇನೆ.
    ಜೆಲ್ಲಿಬೀನ್ ಬರುವವರೆಗೆ SAMSUNG ವಿನಃ ಎಲ್ಲರೂ ಕಾಯಲೇಬೇಕು ಎಂಬ ಮಾಹಿತಿಯಿದೆ. ಅಥವ ಈಗಿರುವ ಮೊಬೈಲ್ನಲ್ಲೆ ಸರಿಯಾಗಿ ಕನ್ನಡ ಮೂಡಿಸಲು ಸಾಧ್ಯವಿದೆಯೆ ದಯವಿಟ್ಟು ತಿಳಿಸಿ.

    ReplyDelete